ಸಮೂಹವು ಎನ್‌ಎಸ್‌ಇ ಮತ್ತು ಬಿಎಸ್‌ಇ ಗಳಲ್ಲಿ ಪಟ್ಟಿಮಾಡಲಾದ ಹತ್ತು ವ್ಯವಹಾರಗಳನ್ನೊಳಗೊಂಡು ಒಟ್ಟೂ 29 ಕಂಪೆನಿಗಳನ್ನೊಳಗೊಂಡಿದೆ. ಚೆನ್ನೈಯಲ್ಲಿ ಮುಖ್ಯಕಛೇರಿ ಹೊಂದಿರುವ ಸಮೂಹದ ಮುಖ್ಯ ಕಂಪೆನಿಗಳು ಕಾರ್ಬೋಡಿಯಂ ಯುನಿವರ್ಸಲ್ ಲಿಮಿಟೆಡ್, ಸಿಜಿ ಪವರ್ ಮತ್ತು ಇಂಡಸ್ಟ್ರಿಯಲ್ ಸೊಲ್ಯೂಶನ್ಸ್ ಲಿಮಿಟೆಡ್, ಚೋಲಮಂಡಲಂ ಫೈನಾನ್ಶಿಯಲ್ ಹೋಲ್ಡಿಂಗ್ಸ್ ಲಿಮಿಟೆಡ್, ಚೋಲಮಂಡಲಂ ಇನ್ವೆಸ್ಟ್ಮೆಂಟ್ ಮತ್ತು ಫೈನಾನ್ಸ್ ಕಂಪನಿ ಲಿಮಿಟೆಡ್, ಚೋಲಮಂಡಲಂ ಎಂಎಸ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, ಕೋರಮಂಡೆಲ್ ಇಂಟರ್ನ್ಯಾಷನಲ್ ಲಿಮಿಟೆಡ್, ಕೋರಮಂಡೆಲ್ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್, ಇ.ಐ.ಡಿ. ಪ್ಯಾರಿ (ಇಂಡಿಯಾ) ಲಿಮಿಟೆಡ್., ಪ್ಯಾರಿ ಆಗ್ರೋ ಇಂಡಸ್ಟ್ರೀಸ್ ಲಿಮಿಟೆಡ್., ಶಾಂತಿ ಗೇರ್ಸ್ ಲಿಮಿಟೆಡ್., ಟ್ಯೂಬ್ ಇನ್ವೆಸ್ಟ್ಮೆಂಟ್ಸ್ ಆಫ್ ಇಂಡಿಯಾ ಲಿಮಿಟೆಡ್. ಮತ್ತು ವೆಂಡ್ಟ್ (ಇಂಡಿಯಾ) ಲಿಮಿಟೆಡ್.
ಅಬ್ರೇಸಿವ್ಸ್, ಟೆಕ್ನಿಕಲ್ ಸೆರಾಮಿಕ್ಸ್, ಎಲೆಕ್ಟ್ರೋ ಮಿನರಲ್ಸ್, ಆಟೋ ಕಾಂಪೊನೆಂಟ್ಸ್ & ಸಿಸ್ಟಮ್ಸ್, ಪವರ್ ಕನ್ವರ್ಶನ್ ಎಕ್ವಿಪ್‌ಮೆಂಟ್, ಟ್ರಾನ್ಸ್‌ಫಾರ್ಮರ್‌ಗಳು ಮತ್ತು ರಿಯಾಕ್ಟರ್‌ಗಳು ಪವರ್ ಟಿ & ಡಿ ವಿಭಾಗ, ರೋಲಿಂಗ್ ಸ್ಟಾಕ್ ಮತ್ತು ಸಿಗ್ನಲಿಂಗ್ ಉಪಕರಣಗಳಲ್ಲಿ ರೈಲ್ವೇಗಳಿಗೆ ಸೊಲ್ಯೂಶನ್‌ಗಳು, ಬೈಸಿಕಲ್‌ಗಳು, ಫರ್ಟಿಲೈಸ್‌ಗಳು ಸಕ್ಕರೆ, ಚಹಾ ಮತ್ತು ಸ್ಪಿರುಲಿನಾ (ನ್ಯೂಟ್ರಾಸ್ಯುಟಿಕಲ್ಸ್) ಸೇರಿದಂತೆ ಹಲವಾರು ಉತ್ಪನ್ನಗಳಲ್ಲಿ ಸಮೂಹವು ಮುಂಚೂಣಿ ಸ್ಥಾನವನ್ನು ಹೊಂದಿದೆ. ಗ್ರೂಪ್ ಚಿಮಿಕ್ ಟ್ಯುನೀಸಿಯನ್, ಫೋಸ್ಕೋರ್, ಮಿಟ್ಸುಯಿ ಸುಮಿಟೊಮೊ, ಮೋರ್ಗಾನ್ ಅಡ್ವಾನ್ಸ್ಡ್ ಮೆಟೀರಿಯಲ್ಸ್, ಯನ್ಮಾರ್ & ಕಂ. ಮತ್ತು ಕಂಪನಿ ಡೆಸ್ ಫಾಸ್ಫಾಟ್ ಡಿ ಗಫ್ಸಾ (ಸಿಪಿಜಿ) ನಂತಹ ಪ್ರಮುಖ ಅಂತರರಾಷ್ಟ್ರೀಯ ಕಂಪನಿಗಳೊಂದಿಗೆ ಸಮೂಹವು ಬಲವಾದ ಮೈತ್ರಿ ಮಾಡಿಕೊಂಡಿದೆ. ಈ ಗುಂಪು ಭಾರತದಾದ್ಯಂತ ವಿಶಾಲವಾದ ಭೌಗೋಳಿಕ ಅಸ್ತಿತ್ವವನ್ನು ಹೊಂದಿದೆ ಮತ್ತು 6 ಖಂಡಗಳನ್ನು ವ್ಯಾಪಿಸಿದೆ.
ಬಿಎಸ್‌ಏ, ಹರ್ಕ್ಯುಲಸ್, ಮೋಂಟ್ರಾ, ಮ್ಯಾಕ್ ಸಿಟಿ, ಬಾಲ್‌ಮಾಸ್ಟರ್, ಅಜಾಕ್ಸ್, ರೋಡಿಯಸ್, ಪ್ಯಾರೀಸ್, ಚೋಲಾ, ಗ್ರೋಮೋರ್, ಶಾಂತಿ ಗೇರ್ಸ್ ಮತ್ತು ಪ್ಯಾರಾಂಫೋಸ್ ಮುಂತಾದ ಹೆಸರಾಂತ ಬ್ರಾಂಡ್‌ಗಳು ಮುರುಗಪ್ಪ ಸಮೂದವೇ ಆಗಿವೆ. ಸಮೂಹವು ವೃತ್ತಿಪರತೆಯ ವಾತಾವರಣವನ್ನು ಪೋಷಿಸುತ್ತದೆ ಮತ್ತು 83500+ಕ್ಕಿಂತಲೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.
ಟ್ಯೂಬ್ ಇನ್ವೆಸ್ಟ್ಮೆಂಟ್ಸ್ ಆಫ್ ಇಂಡಿಯಾ (ಟಿಐಐ) ದೇಶದ ಮುಂಚೂಣಿ ಇಂಜಿನಿಯರಿಂಗ್ ಕಂಪೆನಿಯಾಗಿದ್ದು, ಲೋಹದಿಂದ ತೊಡಗಿ ಮೊಬಿಲಿಟಿ ಸೊಲ್ಯೂಶನ್‌ಗಳವರೆಗೆ ಪೋರ್ಟ್‌ಫೋಲಿಯೋವನ್ನು ಹೊಂದಿದೆ.
ಅದು ಸೈಕಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ, ಟ್ಯೂಬ್‌ಗಳ ಸಪ್ಲೈ ಮೊದಲ ಆಯ್ಕೆಯಾಗಿದೆ, ಲೋಹದಿಂದ ಮಾಡಿದ ಪ್ರಾಡಕ್ಟ್‌ಗಳು ಮತ್ತು ಚೇನ್‌ಗಳನ್ನು ವ್ಯಾಪಕ ಶ್ರೇಣಿಯ ಕೈಗಾರಿಕೆಗಳಿಗೆ ನೀಡುತ್ತಿದೆ. ಟಿಐಐ ಸೇಫ್‌ಟೀ-ಕ್ರಿಟಿಕಲ್ ಪ್ರಿಸಿಶನ್ ಭಾಗಗಳನ್ನು ಮುಖ್ಯ ಓಇಎಮ್‌ಗಳಿಗೆ ಸಪ್ಲೈ ಮಾಡುತ್ತದೆ ಮತ್ತು ವಿದ್ಯುತ್ ವಲಯದಲ್ಲಿ, ಆಫ್-ರೋಡ್ ಆಪ್ಲಿಕೇಶನ್‌ಗಳು, ಟೆಕ್ಸ್‌ಟೈಲ್ ಮಶಿನರಿ, ಮತ್ತು ಜನರಲ್ ಇಂಜಿನಿಯರಿಂಗ್‌ನಲ್ಲಿ ಬಲವಾದ ಉಪಸ್ಥಿತಿಯನ್ನು ಹೊಂದಿದೆ.
ಡೈಮಂಡ್ ಬ್ರ್ಯಾಂಡ್‌ನ ಮೂಲಕ ಕಂಪೆನಿಯು ಆಟೋಮೋಟಿವ್ ಮತ್ತು ಇಂಡಸ್ಟ್ರಿಯಲ್ ಚೇನ್‌ಗಳಲ್ಲಿ ಮುಂಚೂಣಿಯಲ್ಲಿದೆ. . ನಿರಂತರವಾಗಿ ಹೈ ಪ್ರಿಸಿಶನ್ ಮತ್ತು ವಿಶ್ವಶ್ರೇಣಿಯ ಗುಣಮಟ್ಟವನ್ನು ನೀಡುವ ಸಾಮರ್ಥ್ಯವು ಕಂಪೆನಿಯ ಹೆಚ್ಚುತ್ತಿರುವ ರಫ್ತಿಗೆ ಕಾರಣವಾಗಿದೆ. ಟಿಐಐ ಸೈಕಲ್ ರೀಟೇಲಿಂಗ್‌ನಲ್ಲಿ ಬಿಎಸ್‌ಎ, ಹರ್ಕ್ಯೂಲಸ್, ಲೇಡಿಬರ್ಡ್, ರೋಡಿಯೋ, ಮಂತ್ರಾ, ಮ್ಯಾಕ್‌ಸಿಟಿ ಮುಂತಾದ ಪ್ರತಿಷ್ಠಿತ ಬ್ರ್ಯಾಂಡ್‌ಗಳ ಮೂಲಕ ಮೊದಲ ಸ್ಥಾನದಲ್ಲಿದೆ. ಟಿಐಐ ತನ್ನ ಉಪ ಸಂಸ್ಥೆ ಶಾಂತಿ ಗೇರ್ಸ್ ಲಿಮಿಟೆಡ್‌ನ ಮೂಲಕ ಭಾರತದಲ್ಲಿ ಇಂಡಸ್ಟ್ರಿಯಲ್ ಗೇರ್‌ಗಳ ಸೆಗ್‌ಮೆಂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ತನ್ನ ನಾನ್-ಆಟೋಮೇಟಿವ್ ಇಂಜಿನಿಯರಿಂಗ್‌ನಲ್ಲಿನ ಉಪಸ್ಥಿತಿಯನ್ನು ಗಟ್ಟಿಗೊಳಿಸಲು ಸಿಜಿ ಪವರ್ ಅನ್ನು ಸ್ವಾಧೀನಪಡಿಸಿಕೊಂಡಿದೆ.